Posts

Showing posts with the label Story

Hongemaradadi Podcast | An Anaahata Originals

ಸುರೇಶಣ್ಣನ ಸಮಾಜವಾದ

“ ಕುಂಬಳಗೋಡು ಪೋಲಿಸ್ ಠಾಣೆ ” ಎಂಬ ಬೀದಿ ‌ ಬದಿಯಲ್ಲಿದ್ದ ಬೋರ್ಡ್ ಅನ್ನು ಯಾವುದೋ ಯೋಚನೆಯಲ್ಲಿ , ಬಸ್ಸಿನೊಳಗಿನ ಕಿಟಕಿ ಗಾಜನ್ನು ಸರಿಸದೇ ನೋಡುತ್ತಿದ್ದ ನನಗೆ , ಪಕ್ಕದಲ್ಲಿ ಅದ್ಯಾವಾಗಲೋ ಬಂದು ಕುಳಿತ್ತಿದ್ದ ಸುರೇಶಣ್ಣನ ಗುರುತು ಮೊದಲಿಗೆ ಆಗಲಿಲ್ಲ .. ರೋಡ್ ಕಾಮಗಾರಿ ನೆಡೆಯುತ್ತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು .   ಬಸ್ಸಿನಾಚೆ , ಧೂಳಿನ ನೆಡುವೆ “ ಕಡಲೇಕಾಯಿ , ಸೌತೆಕಾಯಿ , ನಿಪ್ಪಟ್ ” ಎಂದು ಕೂಗುತ್ತಿದ್ದ ಬೀದಿವ್ಯಾಪಾರಿಗಳ ಸದ್ದು . ಇದರ ನಡುವೆ , ನನ್ನ ಪಕ್ಕದಲ್ಲಿದ್ದ ಸುರೇಶಣ್ಣ “ ಈ ಬಿಡದಿ ಇಂಡಸ್ಟ್ರಿಯಲ್ ಏರಿಯಾಗೆ ಅಗಲವಾದ ರೋಡ್ ಮಾಡುವ ಬದಲು , ಈ ಸರ್ಕಾರ ಇಲ್ಲಿನ ಹಳ್ಳಿ ಜನರಿಗೆ ಒಳ್ಳೆಯ ಶಾಲೆ ಮತ್ತು ಆಸ್ಪತ್ರೆ ಕಟ್ಟಿಸಬಹುದಿತ್ತು !! ಹೀಗೆ ರೈತರ ಜಮೀನು ಕಿತ್ಕೊಂಡು ಹೈವೇ ಮಾಡಿರೊದ್ರಿಂದ – ಬೈಕ್ ಓಡಿಸಿ ಬರೀ ಕೈಕಾಲು ಮುರಿದುಕೊಳ್ತಿದ್ದ ಯುವಕರು ಈಗ ಪ್ರಾಣಾನೆ ಕಳ್ಕೊತಿದ್ದಾರೆ !! ಅಲ್ವ ಚಂದ್ರು ? ” ಎಂದು ನನ್ನ ಬಳಿ ತಿರುಗಿದರು .. “ ಓ ! ಸುರೇಶಣ್ಣ ನೀವು ಯಾವಾಗ ಇಲ್ಲಿ ಕುತ್ಕೊಂಡ್ರಿ ? Sorry ನಾನು ಗಮನಿಸಲೇ ಇಲ್ಲ ” ಎಂದಿದಕ್ಕೆ ಅವರು “ ನೀನು , ಯಾವುದೋ ಗಾಢವಾದ ಯೋಚನೆಯಲ್ಲಿ ಮುಳುಗಿದ್ಯಲ್ಲ ಆಗಲೇ ಬಂದೆ ” ಎಂದರು .. ಸುರೇಶಣ್ಣ ನಮ್ಮ ಹವ್ಯಾಸಿ ನಾಟಕ ತಂಡದ Full Time Memb...